ಬೆಂಗಳೂರು, ಆ. 25: ರಾಜ್ಯ ಸರ್ಕಾರದ ಸಚಿವರ 40% ಕಮೀಷನ್ ದಂಧೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆದರೆ ಸಚಿವರು ಸೇರಿ ನೂರಕ್ಕೂ ಹೆಚ್ಚು ಶಾಸಕರ ಅಕ್ರಮ ಬಯಲಾಗಲಿದೆ. ಸಚಿವರು ಸೇರಿ 25 ಶಾಸಕರ ಕಮೀಷನ್ ದಂಧೆಯ ದಾಖಲೆಗಳನ್ನು ನಮ್ಮ ಸಂಘ ಒದಗಿಸಲಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಅರೋಪ ಮಾಡಿದ್ದಾರೆ.
ಬೊಮ್ಮಾಯಿ ಸರ್ಕಾರದ 40% ಕಮೀಷನ್ ದಂಧೆಯ ಬಗ್ಗೆ ಜತೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಹಲವು ಮಹತ್ವದ ಅರೋಪ ಮಾಡಿದರು.