August 30, 2022

ಪಂ. ಗಣಪತಿ ಭಟ್ ಹಾಸಣಗಿರವರಿಗೆ ಜನ್ಮದಿನದ ಸಂಭ್ರಮ

ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ. ಗಣಪತಿ ಭಟ್ ಹಾಸಣಗಿರವರು 71ನೇ ಜನ್ಮದಿನವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು, ಇದೇ ಸಂದರ್ಭದಲ್ಲಿ ನಾಡಿನ ಸಂಗೀತಗಾರರು, ಅವರ ಶಿಷ್ಯರು ಹಾಗೂ ಅಭಿಮಾನಿವರ್ಗ ಅವರಿಗೆ ಶುಭಾಶಯ ಕೋರಿ ಅಭಿಂದಿಸಿದರು.

Tumkur accident

ತುಮಕೂರು: ರಸ್ತೆ ಅಪಘಾತ 9ಮಂದಿ ಸಾವು

ತುಮಕೂರು-ಶಿರಾ ಹೆದ್ದಾರಿ ಕಳ್ಳಂಬೆಳ್ಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 9ಮಂದಿ ಸಾವಿಗೀಡಾಗಿ 13 ಮಂದಿ ತೀರ್ವವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿಗೀಡದವರು ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಆಘಾತದ ಸುದ್ದಿಯು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದ್ದು ಸಂತಾಪ ಸೂಚಿಸಿದ್ದಾರೆ, ಮೃತರಿಗೆ 2 ಲಕ್ಷ ಹಾಗೂ ಗಯಾಳುಗಳಿಗೆ 50 ಸಾವಿರ ರೂಗಳ ಪರಿಹಾರ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ 2 ಲಕ್ಷಗಳ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇದೇ

ತಪಸ್ವೀ ಕಾರ್ಯಕರ್ತರು-ಸಮರ್ಪಣೆಯ ಸಂಕೇತ -ವಿಜಯೇಂದ್ರ ಯಡಿಯೂರಪ್ಪ 

ಒಂದು ರಾಜಕೀಯ ಪಕ್ಷದ ಕಾರ್ಯಕರ್ತ ಸಹಜವಾಗಿ ಬಯಸುವುದು ತನ್ನ ಸೇವೆಗೆ ಸೂಕ್ತ ಗೌರವ ಮಾತ್ರ.ಗೌರವವೆಂದರೆ ಸಮ್ಮಾನ,ಅಧಿಕಾರವನ್ನಲ್ಲ , ಅವನ ಕನಿಷ್ಠ ನಿರೀಕ್ಷೆ ತನ್ನ ಸೇವೆ ಹಾಗೂ ಶ್ರಮವನ್ನು ಗುರುತಿಸಿ ಪಕ್ಷದ ಪ್ರಮುಖರು ಅಥವಾ ಅಧಿಕಾರಸ್ಥ ಮುಖಂಡರು ಹೆಸರಿಡಿದು ಕರೆದರಷ್ಟೇ ಸಾಕು, ಅವನು ಧನ್ಯತಾಭಾವ ಹೊಂದುತ್ತಾನೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಗುರುತಿಸಲಿ ಬಿಡಲಿ ತನ್ನ ಸೇವೆ ಸಾರ್ಥಕವಾದರಷ್ಟೇ ಸಾಕು, ಈ ದೇಶ ಸುರಕ್ಷಿತವಾದರೆ ಸಾಕು ಎಂಬ ಆತ್ಮ ಸಂತೋಷವನ್ನು

ಮುರುಘಾ ಶ್ರೀಗಳ ಪ್ರಕರಣದ ತನಿಖೆ ಹೊರರಾಜ್ಯಕ್ಕೆ ವರ್ಗಾಯಿಸಲು ಸಂಸದ ಲೆಹರ್‌ ಸಿಂಗ್ ಸಲಹೆ

ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್‌ ಸಿಂಗ್ ಅವರು ಮುರುಘಾ ಶರಣರ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಕರ್ನಾಟಕದಿಂದ ಹೊರ ರಾಜ್ಯಕ್ಕೆ ವರ್ಗಾಯಿಸಿ ತನಿಖೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಕುರಿತಾಗಿ ಪತ್ರ ಬರೆದಿರುವ ಅವರು ಪ್ರಭಾವಿ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣದಡಿ ಎಫ್‌ಐಆರ್‌ ದಾಖಲಾಗಿದೆ. ಶರಣರ ವಿರುದ್ಧ ಇಬ್ಬರು ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಹಾಗೂ ದುಖಃಕರ ಘಟನೆಯಾಗಿದೆ ಎಂದಿದ್ದಾರೆ.  

Scroll to Top