ಮುರುಘಾ ಮಠದ ಪೀಠಾಧಿಪತಿ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ ಆರೋಪದ ಮೇರೆಗೆ ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ಎಸ್.ಕೆ.ಬಸವರಾಜನ್ ಅವರನ್ನು ವಜಾಗೊಳಿಸಲಾಗಿದೆ ಎಂದು ಮುರುಘಾ ಮಠ ಸ್ಪಷ್ಟಪಡಿಸಿದೆ.
ಎಸ್.ಕೆ. ಬಸವರಾಜನ್ ಅವರನ್ನು ಮಾರ್ಚ್7ರಂದು ಅವರು ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಪುನರ್ ನೇಮಕಗೊಂಡಿದ್ದರು. ಈ ಹಿಂದೆ 2007ರಲ್ಲಿಯೂ ಇವರನ್ನು ಇದೇ ಹುದ್ದೆಯಿಂದ ಕಿತ್ತುಹಾಕಲಾಗಿದ್ದನ್ನು ಸ್ಮರಿಸಬಹುದು.
ಎಸ್.ಕೆ. ಬಸವರಾಜನ್ ಅವರನ್ನು ‘ಲಿಂಗಾಯತ-ವೀರಶೈವ ಸಮಾಜಗಳ ಮುಖಂಡರ ಒತ್ತಾಯಕ್ಕೆ ಮಣಿದು ಮಾರ್ಚ್7ರಂದು ಪುನರ್ನೇಮಕ ಮಾಡಿಕೊಳ್ಳಲಾಗಿತ್ತು. ಮಠ ಮತ್ತು ಬಸವರಾಜನ್ ಅವರ ನಡುವಿನ ವೈಮನಸ್ಸನ್ನು ರಾಜಿಯೊಂದಿಗೆ ಇತ್ಯರ್ಥಗೊಂಡಿತ್ತು. ಮಠದ ಪರವಾಗಿ ಕೊಂಡ ಆಸ್ತಿಗಳನ್ನು ಮಠಕ್ಕೆ ಹಿಂದಿರುಗಿಸುವ ಹಾಗೂ ಹಲವು ಷರತ್ತುಗಳೊಂದಿಗೆ ಪುನರ್ನೇಮಕ ಮಾಡಿಕೊಳ್ಳಲಾಗಿತ್ತು. ಆಡಳಿತಾತ್ಮಕವಾಗಿ ಸಹಕರಿಸದ ಬಸವರಾಜನ್ ಅವರನ್ನು ವಜಾಗೊಳಿಸುವ ಮೂಲಕ ಕ್ರಮ ಜರುಗಿಸಿದೆ ಎಂದು ಮಠದ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.