ತಪಸ್ವೀ ಕಾರ್ಯಕರ್ತರು-ಸಮರ್ಪಣೆಯ ಸಂಕೇತ -ವಿಜಯೇಂದ್ರ ಯಡಿಯೂರಪ್ಪ
ಒಂದು ರಾಜಕೀಯ ಪಕ್ಷದ ಕಾರ್ಯಕರ್ತ ಸಹಜವಾಗಿ ಬಯಸುವುದು ತನ್ನ ಸೇವೆಗೆ ಸೂಕ್ತ ಗೌರವ ಮಾತ್ರ.ಗೌರವವೆಂದರೆ ಸಮ್ಮಾನ,ಅಧಿಕಾರವನ್ನಲ್ಲ , ಅವನ ಕನಿಷ್ಠ ನಿರೀಕ್ಷೆ ತನ್ನ ಸೇವೆ ಹಾಗೂ ಶ್ರಮವನ್ನು ಗುರುತಿಸಿ ಪಕ್ಷದ ಪ್ರಮುಖರು ಅಥವಾ ಅಧಿಕಾರಸ್ಥ ಮುಖಂಡರು ಹೆಸರಿಡಿದು ಕರೆದರಷ್ಟೇ ಸಾಕು, ಅವನು ಧನ್ಯತಾಭಾವ ಹೊಂದುತ್ತಾನೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಗುರುತಿಸಲಿ ಬಿಡಲಿ ತನ್ನ ಸೇವೆ ಸಾರ್ಥಕವಾದರಷ್ಟೇ ಸಾಕು, ಈ ದೇಶ ಸುರಕ್ಷಿತವಾದರೆ ಸಾಕು ಎಂಬ ಆತ್ಮ ಸಂತೋಷವನ್ನು