ಸೋಮವಾರದಂದು (23-01-2023) ದೇವನಹಳ್ಳಿ ಟೌನ್ ನಲ್ಲಿ ಸಾವಿರಾರು ಮಹಿಳೆಯರು ಕುಂಭದೊಂದಿಗೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀಶ್ರೀ ನಂಜಾವಧೂತ ಮಹಾಸ್ವಾಮಿಗಳನ್ನು ಸ್ವಾಗತಿಸಿದರು. ಮೂರು ಕಿಲೋ ಮೀಟರ್ ಗಳ ಮೆರವಣಿಗೆಯಲ್ಲಿ ಆಗಮಿಸಿದ ಶ್ರೀಗಳು ದೇವನಹಳ್ಳಿ ತಾಲ್ಲೂಕಿನ ಜನತೆಗೆ ಸ್ಫಂದಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಮಂಜುನಾಥ ವೆಲ್ಫೇರ್ ಫೌಂಡೇಷನ್ ನ ನೂತನ ಕಚೇರಿಯನ್ನು ಉದ್ಘಾಟಿಸಿ ಆಶೀರ್ವದಿಸಿದರು. ಇದೇ ವೇಳೆಯಲ್ಲಿ ದೇವನಹಳ್ಳಿ ತಾಲ್ಲೂಕಿನ ಜನತೆಗೆ ಸಹಾಯವಾಗಲು ಎರಡು ಅಂಬ್ಯೂಲನ್ಸ್ ಅನ್ನು ಲೋಕಾರ್ಪಣೆ ಮಾಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಯಂದಿರಿಗೆ ಬಾಗಿನದೊಂದಿಗೆ ಗೌರವಿಸಿ, ಮಹಿಳೆಯರಿಗೆ ಸೀರೆಗಳನ್ನು ಕೊಡುಗೆಯಾಗಿ ವಿತರಿಸಲಾಯಿತು. ಚಲನಚಿತ್ರ ನಟ ಹಾಗೂ ಖ್ಯಾತ ನಿರೂಪಕರಾದ ಮಾಸ್ಟರ್ ಆನಂದ್ ಅವರು ಉಪಸ್ಥಿತರಿದ್ದರು.
