ಎಸ್ಎಸ್ಎಲ್ಸಿ ಬಳಿಕ ವಿದ್ಯಾರ್ಥಿಗಳು ಯಾವ ಕೋರ್ಸ್ಗೆ ಸೇರುವುದು ಎನ್ನುವ ಯೋಚನೆಯಲ್ಲಿದ್ದಾರೆ. ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಎಸ್ಎಸ್ಎಲ್ಸಿ ನಂತರ ಏನು ಮಾಡಬೇಕು..? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು..? ಎನ್ನುವ ಪ್ರಶ್ನೆ ಕಾಡುತ್ತಿದೆ.
ಸ್ಮಾರ್ಟ್ವಾಚ್ಗಳ ಮೇಲೆ ಶೇ.70 ರಷ್ಟು ರಿಯಾಯಿತಿ!
ಫಲಿತಾಂಶ ಪ್ರಕಟವಾದ ಮರು ದಿನವೇ ಪಿಯುಸಿ, ಡಿಪ್ಲೊಮ, ನರ್ಸಿಂಗ್ ಸೇರಿದಂತೆ ಅನೇಕ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಗಿಬಿದ್ದಿದ್ದಾರೆ. ಎಸ್ಎಸ್ಎಲ್ಸಿ ನಂತರ ಯಾವೇಲ್ಲ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ, ಎನ್ನುವು ಮಾಹಿತಿಯನ್ನ ನೀಡಲಾಗಿದೆ.
ಪಿಯುಸಿ (ಪದವಿ ಪೂರ್ವ ಶಿಕ್ಷಣ )
ಎಸ್ಎಸ್ಎಲ್ಸಿ ನಂತರ ಎಲ್ಲರು ಮೊದಲು ಸಜೆಸ್ಟ್ ಮಾಡುವುದು ಪಿಯುಸಿ ಯನ್ನ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ ( ವಿಜ್ಞಾನ ವಿಭಾಗ), ಕಾಮರ್ಸ್ ( ವಾಣಿಜ್ಯ ವಿಭಾಗ), ಆರ್ಟ್ಸ ( ಕಲಾ ವಿಭಾಗ ), ಈ ಮೂರು ವಿಭಾಗಗಳಲ್ಲಿ ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್ನಲ್ಲಿ ಅಧ್ಯಯನ ಮಾಡಬಹುದಾಗಿದೆ.
ಪಿಯು ಪ್ರವೇಶಕ್ಕೆ ಭಾರೀ ಡಿಮ್ಯಾಂಡ್ : ಈ ಕೋರ್ಸ್ಗಳಿಗೆ ಪ್ರವೇಶ ಬಯಸುವವರು ಈಗಲೇ ಅರ್ಜಿ ಸಲ್ಲಿಸಿ
ವಿಜ್ಞಾನ ವಿಭಾಗ
ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಈ ವಿಭಾಗ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ನೆಚ್ಚಿನ ವಿಭಾಗವಾಗಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ (PCMB)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ (PCMC)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ (PCME)
ವಾಣಿಜ್ಯ ವಿಭಾಗ (ಕಾಮರ್ಸ್)
ಇನ್ನು ವಾಣಿಜ್ಯ ವಿಭಾಗದಲ್ಲಿ- ಯಾರಿಗೆ ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ, ಚಾರ್ಟರ್ಡ್ ಅಕೌಂಟೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದಕ್ಕೆ ಅವಕಾಶ ನೀಡುತ್ತದೆ. ಇನ್ನು ಯಾವ ವಿದ್ಯಾರ್ಥಿಯೂ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ನಿಮಗೆ ಬಿಟ್ಟಿದ್ದು.
SSLCಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ BBMPಯಿಂದ ಭರ್ಜರಿ ಕೊಡುಗೆ
ಕಲಾ ವಿಭಾಗ (ಆರ್ಟ್ಸ್)
ಇನ್ನು ಕಲೆ- ಭಾಷಾ ವಿಷಯದಲ್ಲಿ ಪಾಂಡಿತ್ಯ ಇರುವವರು ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಹಲವಾರು ಅವಕಾಶಗಳನ್ನು ಒದಗಿಸಿಕೊಡಬಹುದು. ಜೊತೆಗೆ ಹಲವಾರು ಆಯ್ಕೆಗಳು ಕೂಡ ನಿಮಗೆ ಇಲ್ಲಿ ಸಿಗಬಹುದು. ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಬಹುದು. ಅದಲ್ಲದೆ ಪಿಯುಸಿ ನಂತರ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಮಾಡುವುದಕ್ಕೂ ಅವಕಾಶವಿದೆ.
ಡಿಪ್ಲೊಮ ಕೋರ್ಸ್ಗಳು
ಎಸ್ಎಸ್ಎಲ್ಸಿ ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ನಿಮಗೆ ಅವಕಾಶವಿದೆ. ಅದಲ್ಲದೆ ಎಸ್ಎಸ್ಎಲ್ಸಿ ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಗಳು ಕೂಡಾ ಬೇಕಾಗಿದ್ದಲ್ಲಿ ಇಂಜಿನಿಯರಿಂಗ್ನಲ್ಲಿ ನೀವು ಡಿಪ್ಲೊಮ ಮಾಡಬಹುದು.
SSLC ಪಾಸಾದ ವಿದ್ಯಾರ್ಥಿಗಳ ಗಮನಕ್ಕೆ : ರಾಜ್ಯಾದ್ಯಂತ ಡಿಪ್ಲೊಮ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಇಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ಗಳು
ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್
ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ಗಳು.
ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್ಗಳನ್ನು ಕೂಡ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ.
ಡಿಪ್ಲೊಮ ಕೋರ್ಸ್ಗಳು
ಡಿಪ್ಲೊಮ ಇನ್ ಫಾರ್ಮಸಿ
ಡಿಪ್ಲೊಮ ಇನ್ ನರ್ಸಿಂಗ್ ಮತ್ತು ಮಿಡ್ ವೈಫರಿ
ಡಿಪ್ಲೊಮ ಇನ್ ಇಂಟೀರಿಯರ್ ಡಿಸೈನಿಂಗ್
ಡಿಪ್ಲೊಮ ಇನ್ ಪ್ರಿಂಟಿಂಗ್ ಟೆಕ್ನಾಲಜಿ
ಡಿಪ್ಲೊಮ ಟೂಲ್ ಆಂಡ್ ಡೈ ಮೇಕಿಂಗ್
ಡಿಪ್ಲೊಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ
ಡಿಪ್ಲೊಮ ಇನ್ ಪೌಲ್ಟ್ರಿ
ಡಿಪ್ಲೊಮ ಇನ್ ಲೆದರ್ ಟೆಕ್ನಾಲಜಿ
ಡಿಪ್ಲೊಮ ಇನ್ ಮ್ಯೂಸಿಕ್(ಕರ್ನಾಟಿಕ್ ಮತ್ತು ಸಂಗೀತ)
ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ
ಡಿಪ್ಲೊಮ ಇನ್ ಫುಡ್ ಟೆಕ್ನಾಲಜಿ.