ಕೋಲಾರ ಜಿಲ್ಲೆ
ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತಹ ಹಲವಾರು ಸ್ಥಳಗಳು ಕೋಲಾರ ನಗರ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿವೆ. ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ಜಿಲ್ಲೆ’ ಎಂದೇ ಹೆಸರಾಗಿದ್ದ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ