ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ಬಿಜೆಪಿ ವಿರೋಧ

barahachukki-

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ವಿರೋಧಿ ಎಂದು ಮಾಜಿ ಸಚಿವ ಅಶ್ವಥ್​ ನಾರಾಯಣ್​ ಹೇಳಿದ್ದಾರೆ.

ಕಾವೇರಿ ಭಾಗದ ನಮ್ಮ ರೈತರು ಕಷ್ಟದಲ್ಲಿದ್ದು, ಸಚಿವ ಡಿ.ಕೆ. ಶಿವಕುಮಾರ್​ ರಾಜ್ಯದ ರೈತರ ಪಾಲಿಗೆ ವಿರೋಧಿಯಾಗಿ ನಮ್ಮ ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ‌ನೀರು ಹರಿಬಿಟ್ಟಿದ್ದಾರೆ, ಈಗಾಗಲೇ ತಮಿಳುನಾಡಿನ ನಾಲ್ಕು ಅಣೆಕಟ್ಟುಗಳಲ್ಲಿ ನೀರು ಸಂಗ್ರಹವಾಗಿದ್ದರೂ, ಸುಮಾರು‌ 60 ಟಿಎಂಸಿ ಯಷ್ಟು‌ ನೀರು ಹರಿಸಿದ್ದಾರೆ.  “ತಮಿಳುನಾಡಿನಲ್ಲಿ ನೈರುತ್ಯ ಮಾನ್ಸೂನ್ ಉತ್ತಮವಾಗಿದ್ದರೂ ಕೂಡ 15 ಸಾವಿರ‌ ಕ್ಯೂಸೆಕ್ ನೀರನ್ನು ಹರಿಬಿಟ್ಟಿದಾರೆ.

ರಾಜ್ಯ ಸರ್ಕಾರ ಇದರ ವಿರುದ್ಧದ ಹೋರಾಟಕ್ಕೆ ಬಿಜೆಪಿ ನಾಳೆ ಚಾಮರಾಜನಗರ, ಮೈಸೂರು, ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ಸಭೆ ನಡೆಸಲಿದೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ್​ ವಾಗ್ದಾಳಿ ನಡೆಸಿದರು.

Share this post

Scroll to Top