-ಗುರುರಾಜ್ ಶೆಟ್ಟಿ ಗಂಟಿಹೊಳೆ
ನವ ಭಾರತ ನಿರ್ಮಾಣದಲ್ಲಿ ವಿಶ್ವ ನಾಯಕ ನರೇಂದ್ರ ಮೋದಿ ಯೋಜನೆಗಳೇ ದೂರದೃಷ್ಟಿ ಆಲೋಚನೆಯುಳ್ಳ ಯೋಜನೆಗಳು. ನವ ಭಾರತ, ವಿಶ್ವ ಗುರು ಭಾರತದ ಕನಸು ಕಂಡಿರುವ ಮೋದಿ ಒಂದೊಂದಾಗಿ ತಮ್ಮ ಕನಸುಗಳನ್ನ ಈಡೇರಿಸುವ ಮುಖಾಂತರ ವಿಶ್ವಕ್ಕೆ ಭಾರತದ ಶಕ್ತಿಯನ್ನು ಪರಿಚಯಿಸಿದ್ದಾರೆ. ಬದಲಾಗುತ್ತಿದೆ ಭಾರತ ಎನ್ನುವ ನೈಜ್ಯ ಚಿತ್ರಣ ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗುತ್ತಿದೆ.ಇದಕ್ಕೆ ಉತ್ತಮ ಉದಾಹರಣೆಯೇ ಆರ್ಟಿಕಲ್ 370 ರದ್ದುಗೊಳಿಸಿದ್ದು, ಕಾಶ್ಮೀರಕ್ಕೆ ಕಾಂಗ್ರೇಸ್ ಅವಧಿಯಲ್ಲಿ ನೀಡಿದ ವಿಶೇಷ ಸ್ಥಾನಮಾನಗಳನ್ನು ರದ್ದುಗೊಳಿಸಿ ಬದಲಾವಣೆಗೆ ಹೊಸ ಭಾಷ್ಯ ಬರೆದಿದ್ದು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಮೋದಿಜಿ.ಜಮ್ಮು ಕಾಶ್ಮೀರಕ್ಕೆಯಿದ್ದ ವಿಶೇಷ ಸ್ಥಾನಮಾನ ರದ್ದಾಗಿದ್ದು, ಕೇಂದ್ರದ ಎಲ್ಲಾ ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತಿದೆ. ಈ ಹಿಂದೆ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನ ನೀಡಿದ್ದು, ಈ ಹಿಂದೆಯಿದ್ದ ಯಾವ ಕಾನೂನು ಕೂಡ ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಈ ಹಿಂದೆ ಬೇರೆ ರಾಜ್ಯದಿಂದ ಬರುವ ಜನರಿಗೆ ಹೂಡಿಕೆಯಾಗಲಿ ಉದ್ಯಮವನ್ನಾಗಲಿ ಮಾಡುವ ವ್ಯವಸ್ಥೆ ಕಾಶ್ಮೀರದಲ್ಲಿ ಇರಲಿಲ್ಲ. ಆದರೆ ಆರ್ಟಿಕಲ್ 370 ರದ್ದಾದ ಮೇಲೆ ಬೇರೆ ರಾಜ್ಯದ ಜನರು ಕೂಡ ಜಮ್ಮು ಕಾಶ್ಮೀರದಲ್ಲಿ ಹೂಡಿಕೆಯನ್ನು ಮಾಡಬಹುದು ಹಾಗೂ ಬೇರೆ ರಾಜ್ಯದವರು ಅಲ್ಲಿ ಬಂದು ನೆಲೆಸಿ ಮತದಾನದ ಹಕ್ಕನ್ನು ಕೂಡ ಪಡೆಯಬಹುದಾಗಿದೆ.
ಇತ್ತೀಚಿಗಷ್ಟೇ ಇಂಡಿಯಾ ಟುಡೇ ಹಾಗೂ ಸಿಪೋರ್ ನಡೆಸಿದ ಸರ್ವೇ ಪ್ರಕಾರ ನರೇಂದ್ರ ಮೋದಿ ಸರ್ಕಾರದ ಸಾಧನೆ ಏನು ಎನ್ನುವುದರ ಬಗ್ಗೆ ಒಂದು ಚಿತ್ರಣವನ್ನ ನೀಡಿತ್ತು. ಈ ಸರ್ವೇಯ ಪ್ರಕಾರ ಮೋದಿ ಸರ್ಕಾರದ ಸಾಧನೆ ಒಂದು ಕರೋನವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ರೀತಿ, ಎರಡನೇ ಸಾಧನೆ ಭ್ರಷ್ಟಾಚಾರ ರಹಿತ ಸರ್ಕಾರ, ಮೂರನೇಯದ್ದು ಆರ್ಟಿಕಲ್ 370 ರದ್ದುಗೊಳಿಸಿದ್ದು ಎವೆಲ್ಲವೂ ಮೋದಿ ಸರ್ಕಾರದ ಪ್ರಮುಖ ಸಾಧನೆ ಎನ್ನಲಾಗಿದೆ. ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧ ಪಟ್ಟ ವಿಷಯದ ಆರ್ಟಿಕಲ್ 370 ರದ್ದುಗೊಳಿಸಿದ್ದು ಸರಿ ಎನ್ನುವ ಅಭಿಪ್ರಾಯ ದೇಶದೆಲ್ಲೆಡೆ ಮೂಡಿ ಬಂದಿದೆ. ಆರ್ಟಿಕಲ್ 370 ಹಾಗೂ ಆರ್ಟಿಕಲ್ 35ಎ ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಅಧಿಕಾರಯಿದಾಗಿದ್ದು, ದೇಶವೆಲ್ಲ ಒಂದು ಜಮ್ಮು ಕಾಶ್ಮೀರವೇ ಒಂದು ಎನ್ನುವಂತ ವಿಶೇಷ ಅಧಿಕಾರ ನೀಡಿ, ಜಮ್ಮು ಕಾಶ್ಮೀರ ಪ್ರತ್ಯೇಕ ಧ್ವಜ ಹಾಗೂ ಪ್ರತ್ಯೇಕ ಸಂವಿಧಾನವನ್ನು ಕೂಡ ಪಡೆದುಕೊಳ್ಳಬಹುದು ಎನ್ನುವ ಅಧಿಕಾರ ಕಾಂಗ್ರೇಸ್ ಆಡಳಿತ ಅವಧಿಯಲ್ಲಿತ್ತು.75 ವರ್ಷದಿಂದ ಇಂತಹದೊಂದು ವಿಶೇಷ ಅಧಿಕಾರ ಜಮ್ಮು ಕಾಶ್ಮೀರಕಿದ್ದು,ಭಾರತೀಯ ಪಾರ್ಲಿಮೆಂಟ್ ನಲ್ಲಿ ಪಾಸ್ ಆದ ಬಿಲ್ ಗಳನ್ನು ಜಮ್ಮು ಕಾಶ್ಮೀರ ಒಪ್ಪಿಕೊಳ್ಳಬೇಕು ಎನ್ನುವ ಯಾವುದೇ ಆದೇಶವು ಇಲ್ಲದೆ ಜಮ್ಮು ಕಾಶ್ಮೀರ ಕಾರ್ಯನಿರ್ವಹಿಸುತ್ತಿತ್ತು. ಈ ಎಲ್ಲಾ ವಿಶೇಷ ಅಧಿಕಾರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತು. ಇದೆ ವಿಚಾರವಾಗಿ ಒಂದಿಷ್ಟು ಜನ ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಅಧಿಕಾರಿವನ್ನ ರದ್ದುಗೊಳಿಸಿದ್ದು, ತಪ್ಪು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿತ್ತು. ಈಗ ಅವೆಲ್ಲದರ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಪಂಚ ಸದಸ್ಯ ಪೀಠದಿಂದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯ ಕುರಿತು ಕೇಂದ್ರ ಸರ್ಕಾರ ಒಂದಿಷ್ಟು ಅಂಕಿ ಅಂಶಗಳನ್ನ ಒಳಗೊಂಡ ಅಫಿಡೇವಿಟ್ ಸಲ್ಲಿಕೆ ಮಾಡಿದೆ. ಇದರ ಪ್ರಮುಖ ಅಂಶಗಳೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಿದ್ದು, ಆರ್ಟಿಕಲ್ 370 ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ 45.2 ಉಗ್ರಕೃತ್ಯಗಳು ಕಡಿಮೆಯಾಗಿದೆ. ಪಾಕಿಸ್ತಾನದಿಂದ ಜಮ್ಮು ಕಾಶ್ಮೀರದ ಒಳಗೆ ನುಸುಳುತ್ತಿದ್ದ ಉಗ್ರರ ಸಂಖ್ಯೆ ಶೇಕಡಾ 90.2 ರಷ್ಟು ಕಡಿಮೆಯಾಗಿದೆ. ಈ ಹಿಂದೆ ಪ್ರತಿ ಶುಕ್ರವಾರ ಕಾಶ್ಮೀರದ ಸೈನಿಕರ ಪಾಲಿಗೆ ನರಕವಾಗಿತ್ತು, ನಮಾಜ್ ಮುಗಿಸಿ ಬಂದ ಕೂಡಲೇ ಸೈನಿಕರ ಮೇಲೆ ಕಲ್ಲು ತೂರಾಟಗಳು ನಡೆಯುವುದು ಸರ್ವೇ ಸಾಮಾನ್ಯವಾಗಿತ್ತು.2018 ರಲ್ಲಿ 1767 ಕಲ್ಲು ತೂರಾಟ ಪ್ರಕರಣಗಳು ದಾಖಲಾಗಿದ್ದು, ಆರ್ಟಿಕಲ್ 370 ರದ್ದುಗೊಳಿಸಿದ ನಂತರ 2023 ರಲ್ಲಿ ಒಂದೇ ಒಂದು ಕಲ್ಲು ತೂರಾಟಗಳು ನಡೆದಿಲ್ಲ ಎನ್ನುವುದು ಗಮನಾರ್ಹ ವಿಷಯವಾಗಿದೆ.2018 ರ ಸಂದರ್ಭದಲ್ಲಿ 52 ದಿನ ಸಂಘಟಿತ ಕಾಶ್ಮೀರ ಬಂದ್ ಆಗಿತ್ತು, ಆದರೆ 2023 ರ ವೇಳೆ ಯಾವುದೇ ಸಂಘಟಿತ ಬಂದ್ ಕಾಶ್ಮೀರದಲ್ಲಿ ಸಂಭವಿಸಿಲ್ಲ. ಅಷ್ಟೇ ಅಲ್ಲದೆ ಈಗಾಗಲೇ ಕೇಂದ್ರ ಸರ್ಕಾರ ಜಮ್ಮು ಹಾಗೂ ಕಾಶ್ಮೀರದಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿದ್ಧತೆಯನ್ನ ಮಾಡಿಕೊಂಡಿದ್ದು, ಜಮ್ಮು ಹಾಗೂ ಕಾಶ್ಮೀರಕ್ಕೆ ಕೊಡ ಮಾಡಿದ ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕ ಎನ್ನಲಾಗಿದೆ. ಆರ್ಟಿಕಲ್ 370 ಯನ್ನು ರದ್ದುಗೊಳಿಸಿದ್ದ ಸಂದರ್ಭದಲ್ಲಿ ಲಡಾಕ್ ಹಾಗೂ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯಲಿದೆ ಎನ್ನಲಾಗಿದ್ದು, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವುದು ತಾತ್ಕಾಲಿಕ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲೂ ಚುನಾವಣೆ ನಡೆಸಲು ಕೇಂದ್ರ ನಿರ್ಧರಿಸಿದ್ದು ಚುನಾವಣ ಆಯೋಗ ಮತದಾರರ ಪಟ್ಟಿಯನ್ನ ಸಿದ್ದಗೊಳಿಸುತ್ತಿದೆ. ಈಗಾಗಲೇ ಜಿಲ್ಲಾ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದ ಚುನಾವಣೆಗಳು ಪೂರ್ಣಗೊಂಡಿದೆ, ಲೇಹ್ ನಲ್ಲಿ ಚುನಾವಣೆ ಮುಗಿದಿದ್ದು ಕಾರ್ಗಿಲ್ ನಲ್ಲಿ ಶೀಘ್ರವೇ ಚುನಾವಣೆಗೆ ತಯಾರಿ ನಡೆಸಲಾಗುವುದು. ಅಷ್ಟೇ ಅಲ್ಲದೆ ನಂತರದ ದಿನಗಳಲ್ಲಿ ಪುರಸಭೆ ಚುನಾವಣೆ ನಡೆಸಿ ನಂತರ ವಿಧಾನಸಭೆ ಚುನಾವಣೆಗೂ ಮುಂದಾಗಲಿದ್ದೇವೆ ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದೆ. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಜಮ್ಮು ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಅಪಘಾತ ಶೇಕಡಾ 66 % ಕಡಿಮೆಯಾಗಿದೆ. ಜಮ್ಮು ಹಾಗೂ ಕಾಶ್ಮೀರ ಅಭಿವೃದ್ಧಿಗೆ ಪಣತೊಟ್ಟಿರುವ ಕೇಂದ್ರ ಸರ್ಕಾರ, ಜಮ್ಮು ಹಾಗೂ ಕಾಶ್ಮೀರದ ಅಭಿವೃದ್ಧಿಗೆ ವೇಗವನ್ನು ನೀಡಲು ಮುಂದಾಗಿದ್ದು, ಈ ಮೂಲಕ ಸ್ಥಳೀಯ ಯುವ ಜನರಿಗೆ ಸಾಕಷ್ಟು ಉದ್ಯೋಗ ಸೇವೆಗಳು ದೊರೆಯುತ್ತಿದೆ ಎನ್ನಲಾಗಿದೆ. ಕಾಶ್ಮೀರದ ಅಂದಿನ ಮಹಾರಾಜಾ ಹರಿ ಸಿಂಗ್ ತಮ್ಮ ಜನರಿಗೆ ವಿಶೇಷವಾದ ಸೌಲಭ್ಯಗಳನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಆರ್ಟಿಕಲ್ 370ಯನ್ನು ಸೇರಿಸಲು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸಿದ್ದ . ಆ ಷರತ್ತುಗಳನ್ನು ಒಪ್ಪಿದ ಜವಾಹರ್ ಲಾಲ್ ನೆಹರು ಸಂವಿಧಾನದ ಇಪ್ಪತ್ತೊಂದನೇ ಭಾಗದಲ್ಲಿ ಆರ್ಟಿಕಲ್ 270 ಯನ್ನು ಸೇರ್ಪಡೆ ಮಾಡಿದರು. 1954 ರ ವೇಳೆ ರಾಷ್ಟ್ರಪತಿ ಆಡಳಿತದ ಮೂಲಕ ಆರ್ಟಿಕಲ್ 370 ಯನ್ನು ಕಾಶ್ಮೀರಕ್ಕೆ ನೀಡಲಾಯಿತು. ನೆಹರುರವರ ಈ ಒಂದು ತಪ್ಪು ಹೆಜ್ಜೆ ಸಹಸ್ರಾರು ಹಿಂದೂಗಳ ಮಾರಣ ಹೋಮಕ್ಕೆ ಕಾರಣವಾಯಿತು. ಕಾಶ್ಮೀರದಲ್ಲಿ ಎಲ್ಲಿ ನೋಡಿದರಲ್ಲಿ ಗಲಭೆ, ದಾಳಿ, ಕಲ್ಲು ತೂರಾಟ, ಉಗ್ರರ ಅಟ್ಟಹಾಸ, ನಾಗರಿಕರ ಮಾರಣ ಹೋಮ ಇವೆಲ್ಲವೂ ಇಡೀ ಭಾರತವನ್ನೇ ಬೆಚ್ಚಿ ಬಿಳಿಸಿತ್ತು. ತಮ್ಮ ರಾಜಕೀಯ ಲಾಭಕ್ಕಾಗಿ ಅಂದಿನ ಪ್ರಧಾನಿ ನೆಹರು ಮಾಡಿದ ಈ ಒಂದು ತಪ್ಪು ಭಾರತೀಯನು ಯಾವತ್ತು ಮರೆಯುವಂತಿಲ್ಲ. ಸಮೃದ್ಧವಾದ ಭಾರತ ಇದೀಗ ಶಾಂತಿಯುತ ದಾರಿಯತ್ತ ಸಾಗುತ್ತಿದೆ. ಅಧಿಕಾರದ ಆಸೆಗಾಗಿ ಕಾಂಗ್ರೇಸ್ ಸರ್ಕಾರ ಮಾಡಿದ ಕುತಂತ್ರಗಳು ಎಳೆ ಎಳೆಯಾಗಿ ಹೊರಬರುತ್ತಿದೆ. ದೇಶದ ರಕ್ಷಣೆಗಾಗಿ ನರೇಂದ್ರ ಮೋದಿ ಹಗಲಿರುಳು ದುಡಿಯುತ್ತಿದ್ದು, ಕಾಂಗ್ರೇಸ್ ಮಾತ್ರ ತನ್ನ ಕುರ್ಚಿಯ ಲಾಲಸೆಗಾಗಿ ದೇಶವನ್ನೇ ಒಡೆದು ಆಳುವ ನೀತಿಯನ್ನು ಅನುಸರಿಸಿ ದೇಶವನ್ನೇ ಹಾಳು ಮಾಡಲು ಹೊರಟಿದೆ. ಆರ್ಟಿಕಲ್ 370 ರದ್ದು ಮಾಡಿದ್ದು, ತಪ್ಪಾದ ನಿರ್ಣಯ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಸುಪ್ರೀಂ ಕೋರ್ಟ್ ನಲ್ಲೂ ತನ್ನ ವಿತಂಡವಾದ ಮಾಡಲು ತನ್ನ ಪಕ್ಷದ ಮಾಜಿ ಸದಸ್ಯನನ್ನೇ ವಕಾಲತ್ತು ವಹಿಸಲು ಕಳುಹಿಸಿದೆ. ಭಾರತದೇಲ್ಲೆಡೆ ಮೋದಿ ನಾಯಕತ್ವದ ಬಗ್ಗೆ ಸಾಕಷ್ಟು ಸಂತಸವನ್ನ ಜನರು ವ್ಯಕ್ತಪಡಿಸುತ್ತಿದ್ದು, ಇದನ್ನು ಸಹಿಸಲಾರದ ಕಾಂಗ್ರೇಸ್ ಮಾತ್ರ ದಿನೇ ದಿನೇ ತನ್ನ ಕೆಳಮಟ್ಟದ ಟೀಕೆಗಳಿಂದ ಹಾಸ್ಯಕ್ಕಿಡಾಗುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಕುರಿತು ಚರ್ಚೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ಗೆ ಬಿಜೆಪಿ ಸಿದ್ದ ಪಡಿಸಿ ಕಳಿಸಿರುವ ವರದಿ ನಿಜಕ್ಕೂ ದೇಶ ಪರವಾಗಿದೆ ಎನ್ನುವ ಆತ್ಮವಿಶ್ವಾಸ ಪ್ರತಿಯೊಬ್ಬ ದೇಶ ಭಕ್ತನಲ್ಲೂ ಮೂಡಿದೆ. ಮುಂಬರುವ ದಿನಗಳಲ್ಲಿ ಜಮ್ಮು ಕಾಶ್ಮೀರ ಕೂಡ ಭಾರತದ ಸಂವಿಧಾನದ ಅಡಿಯಲ್ಲಿ ಬರುವ ಮುಖಾಂತರ ಆರ್ಥಿಕವಾಗಿ ಭಾರತದ ಅಭಿವೃದ್ಧಿಗೆ ಜಮ್ಮು ಕಾಶ್ಮೀರ ತಳಹದಿಯಾಗಿ ಬೆಳೆಯಲಿದೆ. ಪ್ರವಾಸಿ ಪ್ರದೇಶವಾಗಿರುವ ಜಮ್ಮು ಹಾಗೂ ಕಾಶ್ಮೀರ ಮುಂಬರುವ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿ ದೇಶದ ಪ್ರವಾಸೋದ್ಯಮಕ್ಕೆ ಒಂದೊಳ್ಳೆ ಪ್ರದೇಶವಾಗಿ ಮಾರ್ಪಡಾಗಲಿದೆ. ನಮ್ಮ ಹೆಮ್ಮೆಯ ಪ್ರಧಾನಿ ಹೇಳದಂತೆ ದೇಶದ ಜನರ ಸೇವಕನಾಗಿ ದುಡಿದು ಜನರ ಋಣವನ್ನು ತೀರಿಸುತ್ತೇನೆ ಎಂದಿದ್ದರು. ಅದರಂತೆ ಸನಾತನ ಧರ್ಮ, ಸಂಸ್ಕೃತಿ ಪರಂಪರೆಯನ್ನು ಉಳಿಸುವ ಮುಖಾಂತರ ವಿಶ್ವಕ್ಕೆ ಭಾರತವನ್ನ ನಂಬರ್ 1 ಸ್ಥಾನದಲ್ಲಿ ನಿಲ್ಲಿಸಲು ಸಿದ್ದರಾಗಿದ್ದಾರೆ. ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿರುವ ನಮೋ ಸರ್ಕಾರ, ಆರ್ಟಿಕಲ್ 370 ತಗೆಯುವ ಮೂಲಕ ದೇಶದೆಲ್ಲೆಡೆ ವಿನೂತನ ಚಿಂತನೆಗೆ ನಾಂದಿ ಹಾಡಿದೆ. ಇದರ ಜೊತೆ ಜೊತೆಗೆ ಒಂದು ದೇಶ ಒಂದು ಚುನಾವಣೆ ವಿಚಾರವನ್ನು ಮುಂಬರುವ ದಿನಗಳಲ್ಲಿ ಪ್ರಸ್ತಾಪಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಹೀಗೆ ಮುಂದುವರಿದು ಭಾರತ ವಿಶ್ವ ಗುರುವಾಗುವ ಸಂಧರ್ಭ ಸನಿಹದಲ್ಲಿದೆ ಎನ್ನುವುದೇ ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ.