ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್ ಕೂಟಎಲ್‌ಐಸಿ ತಂಡ ಚಾಂಪಿಯನ್‌

WhatsApp Image 2024-11-19 at 4.30.11 PM

ಬೆಂಗಳೂರು: ಉತ್ತರಾಖಂಡ್‌ ರಾಜಧಾನಿ ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಕ್ರೀಡಾಕೂಟದಲ್ಲಿ ಎಲ್‌ಐಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ತಂಡದ ಸದಸ್ಯೆ ಜಾಯ್ಲಿನ್ ಲೋಬೊ ಅವರು ಲಾಂಗ್ ಜಂಪ್‌ ಮತ್ತು ಟ್ರಿಬ್ಬಲ್ ಜಂಪ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೂಲಕ ಚಿನ್ನದ ಪದಕ ಹಾಗೂ 4×100 ಮತ್ತು 4×400 ರಿಲೇ ಓಟದಲ್ಲಿ ಬೆಳ್ಳಿ ಪದಕ‌ ಗಳಿಸಿ ಗಮನ ಸೆಳೆದರು. ಹೈಜಂಪ್‌ನಲ್ಲಿ ಸುಪ್ರೀತ್ ರಾಜ್ ಗೆ ಚಿನ್ನ, ಜಾವೆಲಿನ್‌ ಮತ್ತು ಶಾಟ್‌ಪುಟ್‌ ಕ್ರೀಡೆಯಲ್ಲಿ ಶಹೆಜಹಾನಿ ರವರು ಚಿನ್ನದ ಪದಕ ಮತ್ತು 4×100 ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಹಿರಿಮೆಗೆ ಪಾತ್ರರಾದರು.

ಇತರ ಕ್ರೀಡಾಪಟುಗಳಾದ ಹರ್ಷಿಣಿ ಅವರು ಹೈಜಂಪ್‌ನಲ್ಲಿ ಚಿನ್ನ, ಟ್ರಿಪ್ಪಲ್ ಜಂಪ್ ಹಾಗು 4×400 ರಿಲೇ ಓಟದಲ್ಲಿ ಬೆಳ್ಳಿ ಪದಕ‌ವನ್ನು ಗೆಲ್ಲುವ ಮೂಲಕ ತಂಡದ ಸಾಧನೆಗೆ ಗಣನೀಯ ಕೊಡುಗೆ ನೀಡಿದರು. ಈ ಮೂಲಕ LIC ತಂಡ ಐದು ವಿಭಾಗಳಲ್ಲಿ ಚಾಂಪಿಯನ್ ಅಗಿ ಹೊರಹೊಮ್ಮಿತು.

LIC ತಂಡವು ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗುವುದರ ಜೊತೆಗೆ ಪುರುಷರ ಫೀಲ್ಡ್ ಮತ್ತು ಟ್ರಾಕ್ ಚಾಂಪಿಯನ್, ಮಹಿಳಾ ಫೀಲ್ಡ್ ಚಾಂಪಿಯನ್ ಪ್ರಶಸ್ತಿಗೂ ಪಾತ್ರವಾಯಿತು.

ಕ್ರೀಡಾಕೂಟದಲ್ಲಿ ಗಣನೀಯ ಸಾಧನೆ ಮಾಡಿದ ತಂಡದ ಸದಸ್ಯರಿಗೆ ಎಲ್‌ಐಸಿ ಸಂಸ್ಥೆಯು ಅಭಿನಂದಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

Share this post

Scroll to Top