ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಮುರುಘಾ ಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿ ಸೆ.2 ಕ್ಕೆ ಮುಂದೂಡಿದರು.
ಮುರುಘಾ ಶರಣರ ಪರವಾಗಿ ವಕೀಲ ಕೆ.ಎನ್ ವಿಶ್ವನಾಥಯ್ಯ ಅವರು ಜಾಮೀನು ಅರ್ಜಿಯನ್ನು ಆ.29ರಂದು ಸಲ್ಲಿಸಿದ್ದರು, ಅರ್ಜಿ ವಿಚಾರಣೆಗೆ ಕೈಗೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾದೀಶೆ ಬಿ.ಕೆ ಕೋಮಲಾ ಅವರು ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಒಂದು ದಿನದ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಸೆ.2 ಕ್ಕೆ ಮುಂದೂಡಿದರು.
ಸಂತ್ರಸ್ತ ಹೆಣ್ಣುಮಕ್ಕಳ ಕೋರ್ಟ್ ಗೆ ಹಾಜರುಪಡಿಸದ ಸಂದರ್ಭದಲ್ಲಿ ಇತರೆ ಪ್ರಕರಣಗಳ ವಕೀಲರನ್ನು ಹೊರಕಳುಹಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡರು. ಸಂತ್ರಸ್ತ ಹೆಣ್ಣುಮಕ್ಕಳ ಪರವಾಗಿ ಹೈಕೋರ್ಟ್ ವಕೀಲರಾದ ಶ್ರೀನಿವಾಸ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಹಾಜರಿದ್ದರು.
