ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರು. ಒಬ್ಬ ನಾಯಕ ಜನರ ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕಿಡಿ ಕಾರಿದ್ದಾರೆ. ಇಲ್ಲಿ ಕಣ್ಣೀರಿಡುವುದು ಪೊಲಿಟಿಕಲ್ ಗಿಮಿಕ್. ಯಾವುದೇ ಅಭ್ಯರ್ಥಿ ಕಣ್ಣೀರು ಹಾಕಿ ಮತದಾರರ ಮನಸ್ಸು ಗೆಲ್ಲಲು ಆಗಲ್ಲ. ಅವರ ತಂದೆ ಮಾಡಿದ ಅವ್ಯವಸ್ಥೆಗೆ ಸಾವಿರಾರು ಜನ ಕಣ್ಣೀರಾಕುತ್ತಿದ್ದಾರೆ. ಕಣ್ಣೀರಿಡುವುದು ಒಬ್ಬ ನಾಯಕನ ಲಕ್ಷಣವಲ್ಲ ಎಂದು ವ್ಯಂಗ್ಯವಾಡಿದ್ದಾರೆ..
ಚನ್ನಪಟ್ಟಣದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗುರುವಾರ ಕನ್ನಮಂಗಲದಲ್ಲಿ ರೋಡ್ಶೋನಲ್ಲಿ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿರುವ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಎರಡು ಬಾರಿ ಗೆದ್ದು ಮುಖ್ಯಮಂತ್ರಿಯಾಗಿದ್ದರೂ ಕೊಟ್ಟ ಭರವಸೆ ಈಡೇರಿಸದ ತಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದುರಾಡಳಿತಕ್ಕೆ ನಿಖಿಲ್ ಕುಮಾರಸ್ವಾಮಿ ಬೆಲೆ ತೆರುತ್ತಿದ್ದಾರೆ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಲ್ಲಿ ತರುವಲ್ಲಿ ಶ್ರಮಿಸಿದ್ದೇನೆ ಚುನಾವಣೆಯಲ್ಲಿ ನನ್ನ ಬೆಂಬಲಿಸುತ್ತಾರೆ ಎಂದು ಸಿ.ಪಿ ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.