Karnataka Newslive

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಉಪಾಧ್ಯಕ್ಷರಾಗಿ N A ಹ್ಯಾರಿಸ್ ಆಯ್ಕೆ

ಇತ್ತೀಚೆಗೆ ನಡೆದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಗೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನ ಶಾಸಕ ಹಾಗೂ ಕರ್ನಾಟಕ ಪುಟ್ಬಾಲ್ ಅಸೋಸಿಯೇಷನ್ ನ ಅಧ್ಯಕ್ಷರಾದ N A ಹ್ಯಾರಿಸ್ ರವರು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಉಪಾಧ್ಯಕ್ಷರಾಗಿ N A ಹಾರಿಸ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಹಾಗೂ ಕಿಪಾ ಅಜಯ್ರವರು ಖಜಾಂಚಿಯಾಗಿ ನೇಮಕವಾಗಿದ್ದಾರೆ.

ಅರಸುರವರ ಬದ್ಧತೆ ಮತ್ತು ಸಾಮಾಜಿಕ ನ್ಯಾಯ -ಡಾ. ಹೆಚ್.ಸಿ ಮಹದೇವಪ್ಪ

:- ಡಾ. ಹೆಚ್.ಸಿ ಮಹದೇವಪ್ಪ :- ಬಹುತೇಕ ಹೋರಾಟಗಳಿಂದಲೇ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಸಾಧ್ಯವಾಗಿಸಿಕೊಂಡ ನಂತರ ರೂಪುಗೊಂಡ ಭಾರತೀಯ ರಾಜಕಾರಣದ ಇತಿಹಾಸವನ್ನು ಹೃದಯವಂತಿಕೆಯಿಂದ ನೋಡುವ ಎಲ್ಲ ಸೂಕ್ಷ್ಮ ಮನಸ್ಸುಗಳೂ ಕೂಡಾ ಅರಸು ಎಂಬ ನಾಯಕನ ಹೆಸರು, ಅವರ ಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಪಟ್ಟ ಶ್ರಮದ ಪರಿಚಯ ಒಂದಿಷ್ಟಾದರೂ ಇರುತ್ತದೆ. ಗರೀಬೀ ಹಟಾವೋ ಎಂಬ ಘೋಷಣೆಯಡಿ ಹಲವು ಯೋಜನೆಗಳ ಮೂಲಕ ಇಂದಿರಾ ಗಾಂಧಿಯವರು ದೇಶದಾದ್ಯಂತ ಇದ್ದ ಬಡವರ ಬದುಕಿನಲ್ಲಿ ಉಂಟು ಮಾಡಿದ ಪರಿಣಾಮವನ್ನೇ ಕರ್ನಾಟಕದಲ್ಲಿ

ಕಾಂಗ್ರೆಸ್ ನ ಮಾಜಿ ಎಂ.ಪಿ, ಮುದ್ಧಹನುಮೇಗೌಡ ಬಿಜೆಪಿ ಸೇರ್ಪಡೆ ಖಚಿತ: ಬಿಎಸ್ ವೈ

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ವಂಚಿತರಾದ ಹಾಗೂ ರಾಜ್ಯಸಭೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ನ ಮಾಜಿ ಲೋಕಸಭಾ ಸದಸ್ಯ ಮುದ್ಧಹನುಮೇಗೌಡ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ.ಮುದ್ಧಹನುಮೇಗೌಡರವರು ಕಾಂಗ್ರೆಸ್ ಬಿಡುವುದಾಗಿ ಹೇಳಿಕೆ ನೀಡುವ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಶಿವಮೊಗದಲ್ಲಿ ಹೇಳಿಕೆ ನೀಡಿರುವ ಬಿಎಸ್ ಯಡಿಯೂರಪ್ಪನವರು ಮುದ್ಧಹನುಮೇಗೌಡರವರ ಸೇರ್ಪಡೆಯ ಜೊತೆಗೆ ಇನ್ನಷ್ಟು ಮುಖಂಡರು ಬಿಜೆಪಿ ಸೇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಮೋದಿಯವರ ಮಂಗಳೂರಿನ ಭೇಟಿ

ಪ್ರಧಾನಿ ನರೇಂದ್ರ ಮೋದಿಯವ ಮಂಗಳೂರಿಗೆ ಆಗಮನ

ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಲಿರುವ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿರವರು ಮಂಗಳೂರು ವಿಮಾನ ನಿಲ್ಧಾಣದಲ್ಲಿ ಬರಮಾಡಿಕೊಂಡರು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಬಂಧನ

ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು ಬಿಗಿ ಭದ್ರತೆಯಲ್ಲಿ ಬಂಧಿಸಿದ್ದಾರೆ. ಮುರುಘಾ ಶರಣರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನೆಡೆಸಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದರೂ ಮುರುಘಾ ಶರಣರನ್ನು ಬಂಧಿಸದೇ ಇರುವುದಕ್ಕೆ ರಾಜ್ಯಾಧ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮುರುಘಾ ಶರಣರ ಬಂಧನ ಮಠದ ಸುತ್ತ ಭಾರಿ ಪೊಲೀಸ್‌ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಮಂಡ್ಯ ಜಿಲ್ಲೆ

ಮಂಡ್ಯ ಜಿಲ್ಲೆ ಉತ್ತರಕ್ಕೆ ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದ,ಪೂರ್ವಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಮತ್ತು ಪಶ್ಚಿಮದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಸುತ್ತುವರಿದಿದೆ. ಮಂಡ್ಯ ಜಿಲ್ಲೆ 7 ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು 4,98,244 ಹೆಕ್ಟೇರ್ ಆಗಿದೆ, ಅದರಲ್ಲಿ 2,53,067 ಹೆಕ್ಟೇರ್ಗಳು ಬಿತ್ತನೆಯ ಪ್ರದೇಶವನ್ನು ರೂಪಿಸುತ್ತವೆ. ಜಿಲ್ಲೆಯ ಒಟ್ಟು ಭೂ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚು ಕೃಷಿ ಬಳಕೆಗೆ ಇಡಲಾಗಿದೆ. 94,779 ಹೆಕ್ಟೇರ್ ಭೂಮಿ ನೀರಾವರಿ ಆಗಿದೆ. 19.25 ಲಕ್ಷದ ಒಟ್ಟು ಜನಸಂಖ್ಯೆಯೊಂದಿಗೆ ಸುಮಾರು

ಚಾಮರಾಜನಗರ ಜಿಲ್ಲೆ

ಚಾಮರಾಜನಗರವನ್ನು ಮೊದಲು ಅರಿಕೊಟ್ಟಾ ಎಂದು ಕರೆಯಲಾಗುತ್ತಿತ್ತು. ಮೈಸೂರುನ ಒಡೆಯರ್ ರಾಜ ಚಾಮರಾಜ ಒಡೆಯರ್ ಇಲ್ಲಿ ಜನಿಸಿದರು ಮತ್ತು ಆದ್ದರಿಂದ ಈ ಸ್ಥಳವನ್ನು ಅವನ ನಂತರ ಮರುನಾಮಕರಣ ಮಾಡಲಾಯಿತು. ಚಾಮರಾಜನಗರ ಜಿಲ್ಲೆಯ ಭೌಗೋಳಿಕ ಪ್ರದೇಶವು ಸುಮಾರು 5,101 ಕಿ.ಮಿ 2 ಆಗಿದೆ. ಜಿಲ್ಲೆಯು ಕರ್ನಾಟಕ ರಾಜ್ಯದ ದಕ್ಷಿಣ ತುದಿಯಲ್ಲಿದೆ ಮತ್ತು ಉತ್ತರ ಅಕ್ಷಾಂಶ 11o 40‘58”ಮತ್ತು 12o 06‘32” ಮತ್ತು ಪೂರ್ವ ರೇಖಾಂಶ76o 24‘14”and 77o46‘55” ನಡುವೆ ಇರುತ್ತದೆ. ಇದು ದಕ್ಷಿಣ ಶುಷ್ಕ ವಲಯದಲ್ಲಿ ಬರುತ್ತದೆ. ಭೂಗೋಳವು ಪೂರ್ವದ ಘಟ್ಟಗಳ ಉತ್ತರ ದಿಕ್ಕಿನ ಬೆಟ್ಟದ ಪರ್ವತ

ಆಡಳಿತಾಧಿಕಾರಿ ಹುದ್ದೆಯಿಂದ ಬಸವರಾಜನ್‌ ವಜಾ: ಮುರುಘಾ ಮಠ ಸ್ಪಷ್ಟನೆ

ಮುರುಘಾ ಮಠದ ಪೀಠಾಧಿಪತಿ ಘನತೆ, ಗೌರವಕ್ಕೆ ಧಕ್ಕೆ ತರಲು ಒಳಸಂಚು ರೂಪಿಸಿದ ಆರೋಪದ ಮೇರೆಗೆ ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಯಿಂದ ಎಸ್‌.ಕೆ.ಬಸವರಾಜನ್‌ ಅವರನ್ನು ವಜಾಗೊಳಿಸಲಾಗಿದೆ ಎಂದು ಮುರುಘಾ ಮಠ ಸ್ಪಷ್ಟಪಡಿಸಿದೆ. ಎಸ್‌.ಕೆ. ಬಸವರಾಜನ್‌ ಅವರನ್ನು ಮಾರ್ಚ್‌7ರಂದು ಅವರು ಮುರುಘಾ ಮಠದ ಆಡಳಿತಾಧಿಕಾರಿ ಮತ್ತು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಪುನರ್ ನೇಮಕಗೊಂಡಿದ್ದರು. ಈ ಹಿಂದೆ 2007ರಲ್ಲಿಯೂ ಇವರನ್ನು ಇದೇ ಹುದ್ದೆಯಿಂದ ಕಿತ್ತುಹಾಕಲಾಗಿದ್ದನ್ನು ಸ್ಮರಿಸಬಹುದು. ಎಸ್‌.ಕೆ. ಬಸವರಾಜನ್‌ ಅವರನ್ನು ‘ಲಿಂಗಾಯತ-ವೀರಶೈವ ಸಮಾಜಗಳ ಮುಖಂಡರ ಒತ್ತಾಯಕ್ಕೆ

CM ಬೊಮ್ಮಾಯಿ ಬೇಟಿ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ

ಬೆಂಗಳೂರು ಸಮೀಪ ನೆಲಮಂಗಲದಲ್ಲಿ ಕ್ಷೇಮವನ ಉದ್ಘಾಟಿಲು ಆಗಮಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥರು ಕರ್ನಾಟಕದ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿರವರನ್ನು ಅವರ ನಿವಾಸಕ್ಕೆ ಬೇಟಿ ನೀಡಿದರು. ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥರವರನ್ನು ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿರವರು ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.

ಶುಕ್ರವಾರ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಡಾ.ಮುದ್ದುಮೋಹನ್ (IAS Retd) ರವರ ಹಿಂದೂಸ್ಥಾನಿ ಗಾಯನ

ಶ್ರೀ ಅರಬಿಂದೋ ವಿಧ್ಯಾ ಮಂದಿರ ಹಾಗೂ ಕಲಾಭಾರತಿ ಅಕಾಡೆಮಿಯು ಗಣೇಶ ಚತುರ್ಥಿ ಅಂಗವಾಗಿ ಕಾಲೇಜಿನ ಆಡಿಟೋರಿಯಮ್ ನಲ್ಲಿ ಏರ್ಪಡಿಸಿರುವ ಮೂರು ದಿನಗಳ ಸಂಗೀತ ಕಾರ್ಯಕ್ರಮದಲ್ಲಿ ಶುಕ್ರವಾರ (02-09-2022) ಸಂಜೆ 5.30ಕ್ಕೆ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಹಿಂದೂಸ್ಥಾನಿ ಸಂಗೀತಗಾರರಾದ ಡಾ.ಮುದ್ದುಮೋಹನ್ ರವರು ಹಿಂದೂಸ್ಥಾನಿ ಗಾಯನ ಪ್ರಸ್ತುತಿಪಡಿಸಲಿದ್ದಾರೆ.

Scroll to Top