ಬಿ.ಎಸ್ ಯಡಿಯೂರಪ್ಪ ದಿಡೀರ್ ದೆಹಲಿಗೆ?
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ದಿಡೀರ್ ದೆಹಲಿಗೆ ತೆರಳಿರುವುದು ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಮೂಲಗಳ ಪ್ರಕಾರ ಇತ್ತೀಚೆಗೆ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕವಾದ ಬಳಿಕ ಪಕ್ಷದ ಮುಖಂಡರುಗಳನ್ನು ಬೇಟಿ ಮಾಡಿ ದನ್ಯವಾದ ತಿಳಿಸಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡ ಹಾಗೂ ಇತರೆ ಮುಖಂಡರನ್ನು ಬೇಟಿ ಮಾಡಲಿದ್ದಾರೆ.