ರಾಷ್ಟ್ರೀಯ ಶಿಕ್ಷಣ ನೀತಿ -2020 ಏನು, ಎತ್ತ…
ಪ್ರಸ್ತುತ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅಗತ್ಯವಾಗಿರುವ, ಸಾಮರ್ಥ್ಯಕ್ಕೆ ಅನುಗುಣವಾಗಿರುವಂತಹ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಮತ್ತು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರೂಪಿಸುವ, ಒಂದು ಶಿಕ್ಷಣ ವ್ಯವಸ್ಥೆಯನ್ನು ರಚಿಸುವ ದೃಷ್ಟಿಕೋನದೊಂದಿಗೆ 2020 ರ ಜುಲೈ 29 ರಂದು ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. 34 ವರ್ಷಗಳ ನಂತರ ಜಾರಿಗೆ ಬರುತ್ತಿರುವ ಈ ನೂತನ ಶಿಕ್ಷಣ ನೀತಿಯು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ. ಇದು ದೇಶದ ಶೈಕ್ಷಣಿಕ ಸಂರಚನೆಯನ್ನು ಪುನರ್