ಸಂಗೀತ

ಶುಕ್ರವಾರ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಡಾ.ಮುದ್ದುಮೋಹನ್ (IAS Retd) ರವರ ಹಿಂದೂಸ್ಥಾನಿ ಗಾಯನ

ಶ್ರೀ ಅರಬಿಂದೋ ವಿಧ್ಯಾ ಮಂದಿರ ಹಾಗೂ ಕಲಾಭಾರತಿ ಅಕಾಡೆಮಿಯು ಗಣೇಶ ಚತುರ್ಥಿ ಅಂಗವಾಗಿ ಕಾಲೇಜಿನ ಆಡಿಟೋರಿಯಮ್ ನಲ್ಲಿ ಏರ್ಪಡಿಸಿರುವ ಮೂರು ದಿನಗಳ ಸಂಗೀತ ಕಾರ್ಯಕ್ರಮದಲ್ಲಿ ಶುಕ್ರವಾರ (02-09-2022) ಸಂಜೆ 5.30ಕ್ಕೆ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಹಿಂದೂಸ್ಥಾನಿ ಸಂಗೀತಗಾರರಾದ ಡಾ.ಮುದ್ದುಮೋಹನ್ ರವರು ಹಿಂದೂಸ್ಥಾನಿ ಗಾಯನ ಪ್ರಸ್ತುತಿಪಡಿಸಲಿದ್ದಾರೆ.

ಪಂ. ಗಣಪತಿ ಭಟ್ ಹಾಸಣಗಿರವರಿಗೆ ಜನ್ಮದಿನದ ಸಂಭ್ರಮ

ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ. ಗಣಪತಿ ಭಟ್ ಹಾಸಣಗಿರವರು 71ನೇ ಜನ್ಮದಿನವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು, ಇದೇ ಸಂದರ್ಭದಲ್ಲಿ ನಾಡಿನ ಸಂಗೀತಗಾರರು, ಅವರ ಶಿಷ್ಯರು ಹಾಗೂ ಅಭಿಮಾನಿವರ್ಗ ಅವರಿಗೆ ಶುಭಾಶಯ ಕೋರಿ ಅಭಿಂದಿಸಿದರು.

ವಿದ್ವಾನ್ ಡಿ.ಬಾಲಕೃಷ್ಣ ರವರ ವೀಣಾವಾದನ ಕಾರ್ಯಕ್ರಮ

ಬೆಂಗಳೂರಿನ ಶ್ರೀ ಯದುಗಿರಿ ಯತಿರಾಜ ಮಠದಲ್ಲಿ ವೀಣಾ ವಿದ್ವಾನ್ ಬಾಲಕೃಷ್ಣ ಡಿ ರವರು ಮೃದಂಗಮ್‌ನಲ್ಲಿ ವಿದ್ವಾನ್ ಅನಿವೃದ್ಧ ಶ್ರೀನಿವಾಸ ಭಟ್ ಹಾಗೂ ವಿದ್ವಾನ್ ರಾಘವೇಂದ್ರ ಪ್ರಕಾಶ್‌ರವರ ಘಟ್ಟಮ್ ಸಾತ್‌ನೊಂದಿಗೆ ವೀಣಾವಾದನ ಕಾರ್ಯಕ್ರಮ ನಡೆಸಿಕೊಟ್ಟರು

Scroll to Top