Uncategorized

ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್ ಕೂಟಎಲ್‌ಐಸಿ ತಂಡ ಚಾಂಪಿಯನ್‌

ಬೆಂಗಳೂರು: ಉತ್ತರಾಖಂಡ್‌ ರಾಜಧಾನಿ ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಕ್ರೀಡಾಕೂಟದಲ್ಲಿ ಎಲ್‌ಐಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಸದಸ್ಯೆ ಜಾಯ್ಲಿನ್ ಲೋಬೊ ಅವರು ಲಾಂಗ್ ಜಂಪ್‌ ಮತ್ತು ಟ್ರಿಬ್ಬಲ್ ಜಂಪ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೂಲಕ ಚಿನ್ನದ ಪದಕ ಹಾಗೂ 4×100 ಮತ್ತು 4×400 ರಿಲೇ ಓಟದಲ್ಲಿ ಬೆಳ್ಳಿ ಪದಕ‌ ಗಳಿಸಿ ಗಮನ ಸೆಳೆದರು. ಹೈಜಂಪ್‌ನಲ್ಲಿ ಸುಪ್ರೀತ್ ರಾಜ್ ಗೆ ಚಿನ್ನ, ಜಾವೆಲಿನ್‌ ಮತ್ತು ಶಾಟ್‌ಪುಟ್‌ ಕ್ರೀಡೆಯಲ್ಲಿ

ಪಾಲಿಕೆ ವಾರ್ಡ್ ಗಳ ಕರಡು ಪಟ್ಟಿ ಪ್ರಕಟಿಸಿದ ಸರ್ಕಾರ:

ಹೈಕೋರ್ಟ್ ಸೂಚನೆ ಮೇರೆಗೆ ಬಿಬಿಎಂಪಿಯು 225 ವಾರ್ಡ್ ಗಳನ್ನಾಗಿ ಮರುವಿಂಗಡಿಸಿ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ, ಬಿಬಿಎಂಪಿಯ 198 ವಾರ್ಡ್ ಗಳನ್ನು 243ಕ್ಕೆ ಹೆಚ್ಚಿಸಲಾಗಿದ್ದು, ವಾರ್ಡ್ ಮರುವಿಂಗಡಣೆಗೆ ಆಕ್ಷೇಪಣೆ ವ್ಯಕ್ತವಾದ ಹಿನ್ನಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯಸರ್ಕಾರ ಮರುವಿಂಗಡಣೆಯ ಲೋಪದೋಷ ಸರಿಪಡಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ 243 ವಾರ್ಡ್ ಗಳನ್ನು 225 ವಾರ್ಡ್ ಗಳನ್ನಾಗಿ ಮರುವಿಂಗಡಿಸಿ ಕರಡುಪಟ್ಟಿ ರಚಿಸಿ ಸರ್ಕಾರಕ್ಕೆ

ಮಂಜುನಾಥ ವೆಲ್ಫೇರ್ ಫೌಂಡೇಷನ್ ಗೆ ಚಾಲನೆ ನೀಡಿದ ನಂಜಾವಧೂತ ಶ್ರೀಗಳು

ಸೋಮವಾರದಂದು (23-01-2023) ದೇವನಹಳ್ಳಿ ಟೌನ್ ನಲ್ಲಿ ಸಾವಿರಾರು ಮಹಿಳೆಯರು ಕುಂಭದೊಂದಿಗೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀಶ್ರೀ ನಂಜಾವಧೂತ ಮಹಾಸ್ವಾಮಿಗಳನ್ನು ಸ್ವಾಗತಿಸಿದರು. ಮೂರು ಕಿಲೋ ಮೀಟರ್ ಗಳ ಮೆರವಣಿಗೆಯಲ್ಲಿ ಆಗಮಿಸಿದ ಶ್ರೀಗಳು ದೇವನಹಳ್ಳಿ ತಾಲ್ಲೂಕಿನ ಜನತೆಗೆ ಸ್ಫಂದಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಮಂಜುನಾಥ ವೆಲ್ಫೇರ್ ಫೌಂಡೇಷನ್ ನ ನೂತನ ಕಚೇರಿಯನ್ನು ಉದ್ಘಾಟಿಸಿ ಆಶೀರ್ವದಿಸಿದರು. ಇದೇ ವೇಳೆಯಲ್ಲಿ ದೇವನಹಳ್ಳಿ ತಾಲ್ಲೂಕಿನ ಜನತೆಗೆ ಸಹಾಯವಾಗಲು ಎರಡು ಅಂಬ್ಯೂಲನ್ಸ್ ಅನ್ನು ಲೋಕಾರ್ಪಣೆ ಮಾಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಯಂದಿರಿಗೆ ಬಾಗಿನದೊಂದಿಗೆ ಗೌರವಿಸಿ,

ಮುರುಘಾ ಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.2ಕ್ಕೆ

ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಮುರುಘಾ ಶರಣರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿ ಸೆ.2 ಕ್ಕೆ ಮುಂದೂಡಿದರು.ಮುರುಘಾ ಶರಣರ ಪರವಾಗಿ ವಕೀಲ ಕೆ.ಎನ್ ವಿಶ್ವನಾಥಯ್ಯ ಅವರು ಜಾಮೀನು ಅರ್ಜಿಯನ್ನು ಆ.29ರಂದು ಸಲ್ಲಿಸಿದ್ದರು, ಅರ್ಜಿ ವಿಚಾರಣೆಗೆ ಕೈಗೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾದೀಶೆ ಬಿ.ಕೆ ಕೋಮಲಾ ಅವರು ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಒಂದು ದಿನದ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಸೆ.2 ಕ್ಕೆ ಮುಂದೂಡಿದರು.ಸಂತ್ರಸ್ತ ಹೆಣ್ಣುಮಕ್ಕಳ ಕೋರ್ಟ್ ಗೆ ಹಾಜರುಪಡಿಸದ ಸಂದರ್ಭದಲ್ಲಿ ಇತರೆ

Tumkur accident

ತುಮಕೂರು: ರಸ್ತೆ ಅಪಘಾತ 9ಮಂದಿ ಸಾವು

ತುಮಕೂರು-ಶಿರಾ ಹೆದ್ದಾರಿ ಕಳ್ಳಂಬೆಳ್ಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 9ಮಂದಿ ಸಾವಿಗೀಡಾಗಿ 13 ಮಂದಿ ತೀರ್ವವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿಗೀಡದವರು ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಆಘಾತದ ಸುದ್ದಿಯು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದ್ದು ಸಂತಾಪ ಸೂಚಿಸಿದ್ದಾರೆ, ಮೃತರಿಗೆ 2 ಲಕ್ಷ ಹಾಗೂ ಗಯಾಳುಗಳಿಗೆ 50 ಸಾವಿರ ರೂಗಳ ಪರಿಹಾರ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ 2 ಲಕ್ಷಗಳ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇದೇ

Scroll to Top